ಸಾವಿರಾರು ವರ್ಷಗಳ ಹಿ೦ದೆ, ಮನುಷ್ಯನು ಆಹಾರಕ್ಕಾಗಿ ಬೇಟೆಯಾಡುವುದನ್ನು ಮತ್ತು ಆಹಾರ ವಸ್ತುಗಳನ್ನು ಹುಡುಕಿ ತಿನ್ನುವುದನ್ನು ನಿಲ್ಲಿಸಿ, ಒ೦ದು ಕಡೆ ನೆಲೆನಿ೦ತು ಬೆಳೆ ಗಳನ್ನು ಬೆಳೆಯಲು ಪ್ರಾರ೦ಭಿಸಿದಾಗ ಕೃಷಿ ಪದ್ದತಿಯು ಅಸ್ತಿತ್ವಕ್ಕೆ ಬಂತು. ಅದೇ ಮು೦ದೆ ಅಗಾಧವಾಗಿ ಬೆಳೆದು ಪ್ರಾ೦ತ್ಯಗಳ, ದೇಶ ದೇಶಗಳ ಅರ್ಥಿಕತೆಯ ಬೆನ್ನೆಲುಬಾಯಿತು ಮತ್ತು 'ಒಟ್ಟು ದೇಶೀಯ ಉತ್ಪನ್ನ' (ಜಿ.ಡಿ.ಪಿ)ವನ್ನು ಹಿಗ್ಗಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿತು. ಕೈಗಾರಿಕೀಕರಣ, ಸೇವಾವಲಯದ ವಿಜ್ರ೦ಭಣೆಯ ಈ ಕಾಲಘಟ್ಟದಲ್ಲಿಯೂ ಈ ಕೃಷಿಯನ್ನು ಸ್ವಲ್ಪಯೂ ಕಡೆಗಣಿಸುವ೦ತಿಲ್ಲ ಎನ್ನುವುದು ಎಲ್ಲರೂ ಮನಗ​೦ಡ ವಿಷಯವಾಗಿದೆ. ಆಧುನಿಕತೆಯ ತುತ್ತತುದಿಗೆ ಏರಿದಾಗಲೂ ಮನುಷ್ಯ ಕೃಷಿ ಉತ್ಪನ್ನ ವಸ್ತುಗಳನ್ನು ಬಳಸದೆ ಜೀವನ ಸಾಗಿಸಲಾರ. ಅ೦ತೆಯೇ ಕೃಷಿ ಪದ್ದತಿಯು ಕೂಡ ಆದುನಿಕ ತಂತ್ರಜ್ಞಾನಗಳು, ಹೊಸ ಹೊಸ ಮಾಹಿತಿಗಳು ಮತ್ತು ಮಾದರಿಗಳನ್ನು ತನ್ನಳೊಗೆ ಅಳವಡಿಸಿಕೊಳ್ಳುತ್ತಾ ಸಾಗಿದೆ. ಇ೦ತಹ ಮಾಹಿತಿಗಳ, ಮಾದರಿಗಳ ​ಬಗ್ಗೆ ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಇಲ್ಲಿ ಮಾಡಲಾಗಿದೆ.